Latest: Add Latest Article Here | Recommended: Add Recommended Article Here
Subscribe For Free Latest Updates!

We'll not spam mate! We promise.



ಇದು ಸುಮಾರು 29 ವರ್ಷಗಳ ಹಿಂದಿನ ಕಥೆ ಆ ಕಾಲದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 1986 ರಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿದ್ದ 'ಆನಂದ್' ಚಿತ್ರ ಬಿಡುಗಡೆಯಾಗಿ ಕೇವಲ 25 ವಾರಗಳ ಕಾಲ ಪ್ರದರ್ಶನ ಕಂಡು ದಾಖಲೆ ಸೃಷ್ಟಿಸಿತ್ತು. ಈ ದಾಖಲೆಯನ್ನು ಮುರಿಯುವುದಾಗಲಿ ಅಥವಾ ಸರಿಗಟ್ಟುವುದಾಗಲಿ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಈಗ 29 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ' ರಂಗಿತರಂಗ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟ ನಿರುಪ್ ಭಂಡಾರಿ ಅವರು ಈ ದಾಖಲೆಯನ್ನು ಮುರಿಯುವತ್ತ ದಾಪುಗಾಲು ಹಾಕಿದ್ದಾರೆ.

ಬರೋಬ್ಬರಿ 25 ವಾರಗಳ ಪ್ರದರ್ಶನ ಕಂಡು ಇನ್ನು ಸಶಕ್ತವಾಗಿ ಮುಂದುವರಿಯುತ್ತಿರುವ 'ರಂಗಿತರಂಗ' ಸಿನಿಮಾದ ಎಲ್ಲಾ ಕ್ರೆಡಿಟ್ ಗಳು ಸಿನಿಮಾದ ಸ್ಕ್ರಿಪ್ಟ್ ಗೆ ಸಲ್ಲಬೇಕು ಎಂದು ನಟ ನಿರುಪ್ ಭಂಡಾರಿ ಅಭಿಪ್ರಾಯ ಪಟ್ಟಿದ್ದಾರೆ.

'ನಾನು ಸಹನಿರ್ದೇಶಕನಾಗಿ ಸಿನಿಮಾದಲ್ಲಿ ಭಾಗಿಯಾಗಿದ್ದು, ನಾಯಕ ನಟನಾಗುವ ಯಾವುದೇ ಯೋಜನೆ ಇರಲಿಲ್ಲ. ಆದರೆ ಕೊನೆಗೆ ಹೊಸಬನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದಾಗ ನನ್ನನ್ನೂ ಆಡಿಶನ್ ಗೆ ಕರೆಯಲಾಯಿತು. ಎಂದು ನಟ ನಿರುಪ್ ಅವರು ಹೀರೋ ಆಗಿ ಆಯ್ಕೆ ಆದದ್ದನ್ನು ನೆನಪಿಸಿಕೊಳ್ಳುತ್ತಾರೆ.
ಇಲ್ಲಿ ಎಲ್ಲರೂ ಹೊಸಬರೇ ಆಗಿದ್ದರಿಂದ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ, ನಾನು ಈಗಲೂ ಮೊದಲಿನಂತೆಯೇ ಇದ್ದೇನೆ.

ಆದರೆ ಜನ ನನ್ನನ್ನು ಗುರುತಿಸುವ ರೀತಿ ಬದಲಾಗಿದೆ. ನನ್ನ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ನನ್ನ ಫೋನ್ ನಂಬರ್ ತಿಳಿದುಕೊಳ್ಳಲು ಜನ ಪ್ರಯತ್ನಿಸುತ್ತಿದ್ದಾರೆ' ಎಂದು ನಿರುಪ್ ನುಡಿಯುತ್ತಾರೆ.

ತಮ್ಮ ಸಹೋದರ ಅನುಪ್ ಭಂಡಾರಿ ಅವರು ನಿರ್ದೇಶನ ಮಾಡಿರುವ'ರಂಗಿತರಂಗ' ಸಿನಿಮಾಗೆ ಟಿವಿ ವಾಹಿನಿಗಳ ಬೇಡಿಕೆ ಹೆಚ್ಚಿದೆಯಂತೆ.

'ಕರ್ನಾಟಕದಾದ್ಯಂತ ಹಲವಾರು ಮಲ್ಟಿಪ್ಲೆಕ್ಸ್ ಗಳನ್ನೂ
ಒಳಗೊಂಡಂತೆ 30ಕ್ಕೂ ಹೆಚ್ಚು ಕಡೆ ಪ್ರದರ್ಶನ
ಕಾಣುತ್ತಿರುವುದರಿಂದ ಟಿವಿ ಹಕ್ಕುಗಳ ಮಾರಾಟ ಮಾಡುವಅವಶ್ಯಕತೆ ಕಂಡುಬಂದಿಲ್ಲ ಎನ್ನುತ್ತಾರೆ ನಟ ನಿರುಪ್.ಅಂದಹಾಗೆ ಸ್ಯಾಂಡಲ್ ವುಡ್ ನ ಹಲವಾರು ನಿರ್ದೇಶಕರುಅವಕಾಶಗಳ ಸುರಿಮಳೆಯನ್ನೇ ಸುರಿಸಿದ್ದಾರಂತೆ. ಆದರೆ ತಮ್ಮಮುಂದಿನ ಯೋಜನೆಗೆ ಸಹೋದರನ ಜೊತೆಗೆ ಸೇರಿಕೊಂಡಿರುವನಿರುಪ್ ಭಂಡಾರಿ 'ಸದ್ಯಕ್ಕೆ ಅಣ್ಣ ಅನುಪ್ ಜೊತೆ ಕೆಲಸ ಮಾಡುವಬಾಂಧವ್ಯ ಚೆನ್ನಾಗಿದೆ. ಮುಂದೆ ಬೇರೆ ನಿರ್ದೇಶಕರ ಜೊತೆ ಕೆಲಸಮಾಡುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ನಿರುಪ್ ಭಂಡಾರಿ ಹೇಳಿದ್ದಾರೆ.

ವಿಶೇಷ ಏನಪ್ಪಾ ಅಂದ್ರೆ ಡಿಸೆಂಬರ್ 20 ರಂದು ಸ್ಯಾಂಡಲ್ ವುಡ್ ನ ಕೋಲ್ಮಿಂಚು 'ರಂಗಿತರಂಗ' ಸಿನಿಮಾ ತಂಡ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲಿದೆ.
.
.

credits : Filmibeat




Copyright © 2016 - Sandalwood Cinema - All Rights Reserved
(Articles Cannot Be Reproduced Without Author Permission.)
Design By : Safe Tricks | Powered By: Blogger