Latest: Add Latest Article Here | Recommended: Add Recommended Article Here
Subscribe For Free Latest Updates!

We'll not spam mate! We promise.



ನಿನ್ನೆಯ ಟಾಸ್ಕಿನಲ್ಲಿ ಅಯ್ಯಪ್ಪ ಅವರನ್ನು ಅಪ್ಪಿ ಅಪ್ಪಿ ಎಂದು ಮುದ್ದಿಸುತ್ತಾ ಆರೈಕೆ ಮಾಡಿದ ಪೂಜಾ ಟಾಸ್ಕ್ ಅನ್ನು ತುಂಬಾ ಎಂಜಾಯ್ ಮಾಡಿದ್ದರು. ಅಲ್ಲದೆ ಟಾಸ್ಕ್ ಮುಗಿದ ಮೇಲೆ ಅಯ್ಯಪ್ಪ ಅವರನ್ನು ಮದುವೆಯಾಗೋಕೆ ನಾನು ರೆಡಿ ಎಂದು ಚಂದನ್ ಮತ್ತು ಭಾವನಾ ಬಳಿ ಹೇಳಿದರು.
ಟಾಸ್ಕ್ ನಡೆಯುವಾಗ ನಾನು ಅಯ್ಯಪ್ಪರನ್ನು ಅಪ್ಪಿ ಎಂದು ಕರೆದೆ ಅಂದರೆ ಅಪ್ಪಿ ತಂದೆ ಅಯ್ಯಪ್ಪ ಎಂದು ಇಮ್ಯಾಜಿನ್ ಮಾಡಿಕೊಂಡಿದ್ದೆ ಎಂದರು ಪೂಜಾ. ಅವರ ಮನಸ್ಸಿನಲ್ಲಿ ಅಯ್ಯಪ್ಪರೊಂದಿಗೆ ಮದುವೆಯ ಕನಸುಗಳು ಹುಟ್ಟುತ್ತಿರುವುದಂತೂ ನಿಜ. ಆದರೆ ಅಯ್ಯಪ್ಪ ಮಾತ್ರ ಅತ್ತ ಹೂಂ ಎನ್ನದೆ ಇತ್ತ ಇಲ್ಲ ಎಂತಲೂ ಹೇಳದೆ ಪೂಜಾರನ್ನು ಆಟವಾಡಿಸುತ್ತಿದ್ದಾರೆ.
ಇವರಿಬ್ಬರೂ ಮನೆಯಲ್ಲಿ ಪ್ರೇಮ ಪಕ್ಷಿಗಳಂತೆ ಓಡಾಡಿಕೊಂಡಿರುವುದು ನಿಜವಾದ ಪ್ರೀತಿಯಿಂದಲೋ ಇಲ್ಲಾ ಇದೆಲ್ಲಾ ಬಿಗ್‍ಬಾಸ್‍ನ ಗಿಮಿಕ್ಕೋ ಎಂದು ವೀಕ್ಷಕರು ಈಗ ಕನ್‍ಫ್ಯೂಸ್ ಆಗಿದ್ದಾರೆ. ಮನೆಯಿಂದ ಹೊರಗೆ ಬಂದ ಮೇಲೆ ಪೂಜಾ ಮನದಾಸೆಯಂತೆ ಅಯ್ಯಪ್ಪ ಮದುವೆಯ ವಿಚಾರವನ್ನು ಸೀರಿಯಸ್ಸಾಗಿ ತಗೋತಾರೋ ಅಥವಾ ಎಲ್ಲಾ ಮರೆತು ಇಬ್ಬರೂ ಅವರವರ ದಾರಿ ನೋಡಿಕೊಳ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.




Copyright © 2016 - Sandalwood Cinema - All Rights Reserved
(Articles Cannot Be Reproduced Without Author Permission.)
Design By : Safe Tricks | Powered By: Blogger