Latest: Add Latest Article Here | Recommended: Add Recommended Article Here
Subscribe For Free Latest Updates!

We'll not spam mate! We promise.



1. ಭರವಸೆಯ ನಟ ಗುರುನಂದನ್
'ಫಸ್ಟ್ ರ್ಯಾಂಕ್ ರಾಜು' ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಟ ಗುರುನಂದನ್ ಅವರು ಬೆಳ್ಳಿತೆರೆ ಮೇಲೆ ಕಾಲಿಟ್ಟಿದ್ದು, ಮೊದಲ ಚಿತ್ರದಲ್ಲಿಯೇ ತಮ್ಮ ಉತ್ತಮ ನಟನೆಯ ಮೂಲಕ ಪ್ರೇಕ್ಷಕರ ಮನಗೆಲ್ಲುವುದು ಪಕ್ಕಾ ಅನ್ನೋದು ಟ್ರೈಲರ್, ಟೀಸರ್ ಹಾಗೂ ಪೋಸ್ಟರ್ ನೋಡಿದವರು ಸುಲಭವಾಗಿ ಹೇಳಬಹುದು.

2. ತೆರೆಯ ಮೇಲೆ ಲೀಡ್ ಜೋಡಿಗಳ ಕೆಮಿಸ್ಟ್ರಿ
ನಟ ಗುರುನಂದನ್, ಅಪೂರ್ವ ಮತ್ತು ತನಿಷ್ಕಾ ಅವರು ತೆರೆಯ ಮೇಲೆ ಉತ್ತಮ ಜೋಡಿಯಾಗಿ ಮಿಂಚಿದ್ದಾರೆ. ಇನ್ನು ವಿಧೇಯ ವಿದ್ಯಾರ್ಥಿಯಾಗಿ ಗುರುನಂದನ್ ಕಾಣಿಸಿಕೊಂಡರೆ, ಅವರ ಏಕಾಗ್ರತೆಯನ್ನು ಕೆಡಿಸಲು ಅಪೂರ್ವ ಮತ್ತು ತನಿಷ್ಕಾ ಅವರು
ತಮ್ಮ ಗ್ಲಾಮರ್ ಅನ್ನು ತುಂಬಿದ್ದಾರೆ.

3. ಎಲ್ಲರಿಂದ ಮೆಚ್ಚುಗೆ ಪಡೆದ ಚಿತ್ರ
ನರೇಶ್ ಅವರ 'ಫಸ್ಟ್ ರ್ಯಾಂಕ್ ರಾಜು' ಸಿನಿಮಾ ಈಗಾಗಲೇ ಗಾಂಧಿನಗರದಲ್ಲಿ ಟಾಕ್ ಆಫ್ ದ ಟಾಪಿಕ್ ಆಗಿದೆ. ಪ್ರೇಕ್ಷಕರಿಗೆ ಸಖತ್ ಕಾಮಿಡಿ ಪಂಚ್ ಜೊತೆಗೆ ರಾಜು ಎಂಬ ಹುಡುಗನ ಸುತ್ತ ಸುತ್ತುವ ಕಥೆಯಲ್ಲಿ ನಾಯಕ ರಾಜು ಅಕಾಡೆಮಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೆ, ಸಾಮಾನ್ಯ ಜ್ಞಾನದಲ್ಲಿ
ಹಿಂದುಳಿದಿರುತ್ತಾನೆ. ಆದರೆ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ 100% ಹಾಜರಾತಿ ಪಡೆದುಕೊಳ್ಳುತ್ತಾ, ಕಾದು
ನೋಡೋಣ.

4. ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಈ ಸಿನಿಮಾ ಅರ್ಪಣೆ ನಟ ಕಿಶೋರ್ ಅವರ 'ವಾಸ್ಕೋಡಿಗಾಮ' ಚಿತ್ರದ ನಂತರ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ 'ಫಸ್ಟ್ ರ್ಯಾಂಕ್ ರಾಜು' ಸಿನಿಮಾ ಬರುತ್ತಿದ್ದು, ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಹಾಗೂ ಈಗಿನ ಕಾಲದ ಯುವಜನರನ್ನು ಟಾರ್ಗೆಟ್
ಮಾಡಿ ಈ ಸಿನಿಮಾ ಮಾಡಲಾಗಿದೆ.

5. ವಿಭಿನ್ನ ಪ್ರಕಾರದ ಸಿನಿಮಾ
ಬರೀ ರೌಡಿಸಂ ಸಿನಿಮಾಗಳನ್ನು ಪಕ್ಕಕ್ಕಿಟ್ಟು, ಕಲಾತ್ಮಕ
ಸಿನಿಮಾಗಳು ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡುತ್ತಿದ್ದು, 'ರಂಗಿತರಂಗ', 'ಕೆಂಡಸಂಪಿಗೆ' 'ಆಟಗಾರ'ಮತ್ತು 'ಕೃಷ್ಣಲೀಲಾ' ಮುಂತಾದ ಸಿನಿಮಾಗಳ ಸಾಲಿಗೆ ಇದೀಗ ನರೇಶ್ ಅವರ 'ಫಸ್ಟ್ ರ್ಯಾಂಕ್ ರಾಜು' ಹೊಸ ಸೇರ್ಪಡೆ. ಇದು ಕೂಡ ಆ ಚಿತ್ರಗಳಂತೆ ಹಿಟ್ ಲಿಸ್ಟ್ ಗೆ ಸೇರುತ್ತಾ ನೋಡೋಣ.

6. ಹಾಡುಗಳು ಹಿಟ್ ಈಗಾಗಲೇ ಚಿತ್ರದ ಹಾಡುಗಳು ಭಾರಿ ಹಿಟ್ ಆಗಿದ್ದು, ಅದರಲ್ಲೂ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಹಾಡಿರುವ 'ಶುರು ಶುರು' ಮತ್ತು 'ಏಲಂಗಿ' ಹಾಡುಗಳು ಎಲ್ಲರ ಫೇವರೆಟ್ ಆಗಿದೆ.

courtesy: filmibeat




Copyright © 2016 - Sandalwood Cinema - All Rights Reserved
(Articles Cannot Be Reproduced Without Author Permission.)
Design By : Safe Tricks | Powered By: Blogger