Latest: Add Latest Article Here | Recommended: Add Recommended Article Here
Subscribe For Free Latest Updates!

We'll not spam mate! We promise.



2014ರಲ್ಲಿ ಬಿಡುಗಡೆಯಾದ ಚಿತ್ರಗಳಲೆಲ್ಲಾ ಅತ್ಯಂತ ನೆನಪಿನಲ್ಲಿ ಉಳಿಯುವ ಸಿನಿಮಾವೆಂದರೆ ”ಉಗ್ರಂ”..
ಹಲವಾರು ಯಶಸ್ವಿ ಸಿನಿಮಾಗಳು ಬರಬಹುದು, ಹೋಗಬಹುದು.. ಆದರೆ ವಿಭಿನ್ನ ಅನುಭವ ನೀಡುವ, ಅಚ್ಚರಿಗೆ ದೂಡುವ ಮತ್ತು ಪದೇ ಪದೇ ನೋಡಿಸಿಕೊಳ್ಳುವ ಸಿನಿಮಾಗಳು ಬರುವುದು ಕಡಿಮೆ. ಉಗ್ರಂ ಅಂತಹದೊಂದು ಸ್ಪೆಷಲ್ ಸಿನಿಮಾ.. ಒಬ್ಬ ಹೊಸ ನಿರ್ದೇಶಕನ ಮತ್ತು ಸೋಲಿನ ಸುಳಿಯಲ್ಲಿ ಸಿಲುಕಿದ್ದ ನಾಯಕನಟನ ಕಾಂಬಿನೇಶನ್ ನಲ್ಲಿ
ಅಂತಹದೊಂದು ಸಿನಿಮಾವನ್ನು ಯಾರೂ ನಿರೀಕ್ಷಿಸಿರಲಿಲ್ಲ.. ಅತ್ಯತ್ಕೃಷ್ಟ ತಾಂತ್ರಿಕತೆ, ಥ್ರಿಲ್
ನೀಡುವ ಹೀರೋಯಿಸಂ ವಿಷಯಗಳು, ಹಾಡು ಮತ್ತು ಹಿನ್ನೆಲೆ ಸಂಗೀತ, ನಿರ್ದೇಶನ, ಕಥೆ ಹೇಳಿದ ರೀತಿ, ಹೀಗೆ ”ಉಗ್ರಂ”ನ ಎಲ್ಲಾ ವಿಷಯಗಳು ಪ್ರೇಕ್ಷಕರಿಗೆ ಖುಷಿಕೊಟ್ಟಿದ್ದವು.. ”ಉಗ್ರಂ”ನಿಂದ ಅನಾಮತ್ತಾಗಿ ಕಮ್
ಬ್ಯಾಕ್ ಮಾಡಿದ ನಟ ಶ್ರೀ ಮುರಳಿ,
ಉಗ್ರಂ ಶ್ರೀ ಮುರಳಿ ಎಂದೇ ಖ್ಯಾತರಾದರು.. ಅವರ ಮುಂದಿನ ಚಿತ್ರ ಯಾವುದು ಎಂಬ ಸಹಜ
ಕುತೂಹಲ ಪ್ರತಿಯೊಬ್ಬ ಉಗ್ರಂ ಅಭಿಮಾನಿಯಲ್ಲಿ ಇತ್ತು.. ಸ್ವತಃ ಮುರಳಿಯವರೇ ತನ್ನ ಮುಂದಿನ
ಹೆಜ್ಜೆಯನ್ನು ಜಾಗರೂಕವಾಗಿ ಇಡುತ್ತೇನೆಂದು, ಉಗ್ರಂ
ಯಶಸ್ಸನ್ನು, ಪ್ರೇಕ್ಷಕರು ತೋರಿಸಿದ ಪ್ರೀತಿ ಅಭಿಮಾನಗಳನ್ನು ಉಳಿಸಿಕೊಂಡು ಹೋಗಲು
ಕಾಯಾವಾಚಾಮನಸ ದುಡಿಯುತ್ತೇನೆಂದು
ಹೇಳಿಕೊಂಡು ಭರವಸೆ ಮೂಡಿಸಿದ್ದರು. ಚಂದ್ರಶೇಖರ
ಬಂಡಿಯಪ್ಪ ಅನ್ನೋ ನಿರ್ದೇಶಕರ ಜೊತೆ ”ರಥಾವರ” ಅನ್ನೋ ಸಿನಿಮಾ ಮಾಡಲು ಅವರು ಮುಂದಾದಾಗ ರಾಜ್ಯಾದ್ಯಂತ ಎಲ್ಲ ”ಉಗ್ರಂ” ಮನಸ್ಸುಗಳು ಶ್ರೀ ಮುರಳಿಗೆ ಶುಭ ಹಾರೈಸಿದವು.
ಶ್ರೀ ಮುರಳಿಯವರ ಹುಟ್ಟುಹಬ್ಬದಂದು ”ರಥಾವರ”
ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಯಿತು, ಪೋಸ್ಟರ್ ನೋಡಿದ ಚಿತ್ರರಸಿಕರು ”ಸಿನಿಮಾ
ಗ್ಯಾರಂಟಿ ಚೆನ್ನಾಗಿರುತ್ತೆ ಬಾಸ್” ಅಂತ ಮಾತನಾಡಿಕೊಂಡರು. ರಥಾವರ ಚಿತ್ರೀಕರಣ
ಅಂದುಕೊಂಡದ್ದಕ್ಕಿಂತ ಸ್ವಲ್ಪ ತಡವೇ ಆಯಿತು, ಸಿನಿಮಾ ಯಾವಾಗ ರಿಲೀಸ್ ಎಂದು ವಿಚಾರಿಸಿಕೊಂಡರು ಚಿತ್ರರಸಿಕರು.. ಚಿತ್ರದ ಗುಣಮಟ್ಟದ ಉತ್ಕೃಷ್ಟತೆಗಾಗಿ ಚಿತ್ರೀಕರಣ
ತಡವಾಗಿದೆ ಎಂದು ಹೇಳಿಕೊಂಡ
ಶ್ರೀ ಮುರಳಿಯವರು ಮತ್ತಷ್ಟು ಭರವಸೆ ಮೂಡಿಸಿದರು.. ಚಿತ್ರದ ಬಗ್ಗೆ ಇದ್ದ ಎಲ್ಲಾ ಭರವಸೆಗಳಿಗೂ ಉತ್ತರ ಸಿಕ್ಕಿದ್ದು
”ರಥಾವರ” ಟೀಸರ್
ನೋಡಿದಾಗ, ಅದರಲ್ಲೂ ಟೀಸರ್ ನಲ್ಲಿದ್ದ ”ಕೇಸ್ ಮಾಡೋದು ದೊಡ್ಡ ವಿಷ್ಯ ಇಲ್ಲ, ಕೇಸ್ ಮಾಡುದ್ರೆ, ಇಂತಾ ಕೇಸು ಇದ್ಯಾ ಅಂತ ಪೊಲೀಸ್ ಗಳು ಹುಡುಕಾಡ್ ಬೇಕು,ಲಾಯರ್ ಗಳು ತಡಕಾಡ್ ಬೇಕು”
ಅನ್ನೋ ಮೆಗಾ ಪಂಚಿಂಗ್ ಡೈಲಾಗ್
ಯರ್ರಾಬಿರ್ರಿ ಹಿಟ್ ಆಯಿತು. ಸ್ವಲ್ಪದಿನಗಳ
ನಂತರ ಬಿಡುಗಡೆಯಾದ ಸಾಂಗ್
ಟೀಸರ್ ಗಳು ಮತ್ತು ಟ್ರೈಲರ್ ಚಿತ್ರದ
ಬಗ್ಗೆಗಿನ ಕ್ರೇಜ಼್ ಅನ್ನು ಇಮ್ಮಡಿಗೊಳಿಸಿದವು.
ಸ್ವಲ್ಪ ಉಗ್ರಂ ಇದ್ದಾಂಗೇ ಇದೆ ಅನ್ನೋದು ಬಿಟ್ಟರೆ ”ರಥಾವರ” ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಖತ್
ಕುತೂಹಲವಿದೆ, ದೊಡ್ಡಮಟ್ಟದ
ಭರವಸೆಯೊಂದಿಗೆ ಈ ವಾರ ರಥಾವರ ರಾಜ್ಯಾದ್ಯಂತ
ಬಿಡುಗಡೆಯಾಗುತ್ತಿದೆ, ನಾಳೆಯಿಂದ ಅಡ್ವಾನ್ಸ್ ಬುಕಿಂಗ್ ಶುರುವಾಗಲಿದೆ. ಉಗ್ರಂ ನ ಫೆಂಟಾಸ್ಟಿಕ್ ಫಾರ್ಮ್ ನಲ್ಲಿ ಮುರಳಿ, ಚಿಕ್ಕಣ್ಣ ಕಾಮಿಡಿ, ರವಿಶಂಕರ್
ಅಬ್ಬರ ಮತ್ತು ರವಿಬಸ್ರೂರು ಹಿನ್ನೆಲೆ ಸಂಗೀತ ಸಧ್ಯದ ಆಕರ್ಷಣೆಗಳಾಗಿವೆ. ಚಿತ್ರಕ್ಕೆ ಮುಲಾಜಿಲ್ಲದೆ ಒಳ್ಳೆ ಓಪನಿಂಗ್ ಸಿಗುತ್ತೆ, ಸಿನಿಮಾ ಉಗ್ರಂ ರೇಂಜ್ ಗೆ
ಜನರಿಗೆ ಹಿಡಿಸಿಬಿಟ್ಟರೆ ಬಾಕ್ಸ್ ಆಫೀಸ್ ಧೂಳ್ ಗ್ಯಾರಂಟಿ. ಬಹಳಷ್ಟು ಜನ ಸ್ವಾಭಿಮಾನಿ ಕನ್ನಡ
ಚಿತ್ರಪ್ರೇಮಿಗಳಂತೆ ನಾವೂ (sandalwood cinema) ಕೂಡ ”ರಥಾವರ” ಚಿತ್ರದ ಯಶಸ್ಸನ್ನು ಬಹುವಾಗಿ ಕೋರುತ್ತಿದ್ದೇವೆ. ಹೈಪ್ ಹುಟ್ಟಿಸಿದ ಸ್ವಮೇಕ್ ಕನ್ನಡ ಚಿತ್ರಗಳು ಗೆಲ್ಲಬೇಕು, ಆಗಲೇ ಕನ್ನಡ
ಚಿತ್ರರಂಗದ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚುವುದು, ಮಾರ್ಕೆಟ್ ಬೆಳೆಯುವುದು ಮತ್ತು ಮತ್ತಷ್ಟು
ಹೊಸ ಪ್ರಯತ್ನಗಳಿಗೆ ನಾಂದಿಯಾಗುವುದು. ಹೀಗಾಗಿ
”ರಥಾವರ”ದಂತಹ ಸಿನಿಮಾಗಳ ಯಶಸ್ಸು ಅತ್ಯಾವಶ್ಯಕ.. ”ರಥಾವರ”ನಿಗೆ ಎಲ್ಲಾ ರೀತಿಯಲ್ಲೂ
ಶುಭವಾಗಲಿ..

courtesy: www.Namcinema.com




Copyright © 2016 - Sandalwood Cinema - All Rights Reserved
(Articles Cannot Be Reproduced Without Author Permission.)
Design By : Safe Tricks | Powered By: Blogger